ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಜ್ಞಾನ ವೃದ್ದಿಸುವ ಕಲೆ: ಕುಂಬ್ಳೆ ಸುಂದರ್ ರಾವ್

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಡಿಸೆ೦ಬರ್ 5 , 2013
ಡಿಸೆ೦ಬರ್ 5, 2013

ಯಕ್ಷಗಾನ ಜ್ಞಾನ ವೃದ್ದಿಸುವ ಕಲೆ: ಕುಂಬ್ಳೆ ಸುಂದರ್ ರಾವ್

ಸಚ್ಚೇರಿಪೇಟೆ : ಯಕ್ಷಗಾನ ಕಲೆ ಶುದ್ಧ ಜ್ಞಾನದ ಕಲೆ, ಇದರ ಅಳಿವು ಎಂದಿಗೂ ಸಾಧ್ಯವಿಲ್ಲ . ಯಕ್ಷಗಾನ ಸಮಾಜದಲ್ಲಿ ಅತ್ಯಂತ ಗೌರವ ಪಡಕೊಂಡಿದ್ದು, ನಮ್ಮ ನಾಡಿನಲ್ಲಿ ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ, ಅದರ ಜೊತೆಯಲ್ಲಿ ಕಲಾವಿದರನ್ನು ನಿರಂತರವಾಗಿ ಬೆಳೆಸುತ್ತಿದೆ. ಶುದ್ಧ ಭಾಷೆ ಹಾಗೂ ಸಂಸ್ಕತಿ ಇಂದಿಗೂ ಶಾಶ್ವತ ನೆಲೆನಿಂತ ಕಲೆ ಯಕ್ಷಗಾನ ಎಂದರೆ ತಪ್ಪಿಲ್ಲ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಡೆಮಿಯ ಮಾಜಿ ಅಧ್ಯಕ್ಷರಾದ ಕುಂಬ್ಳೆ ಸುಂದರ್ ರಾವ್ ಹೇಳಿದರು.

ಅವರು ಸೂಡ ಶ್ರೀ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿಯ ಆಶ್ರಯದಲ್ಲಿ ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬೆಳ್ಮಣ್ ಜೇಸಿಐ ವೇದಿಕೆಯಲ್ಲಿ ಜರುಗಿದ ಆಟ-ಕೂಟ-ಕುದಿಕೂಟ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಪುರಾಣಗಳನ್ನು ಪ್ರವಚನದ ಮೂಲಕ ಜ್ಞಾನವನ್ನು ಕೊಡುತ್ತಿದ್ದರು. ಅದೇ ಕೆಲಸವನ್ನು ಯಕ್ಷಗಾನದ ಮುಖಾಂತರ ಜನರಿಗೆ ತಲುಪುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಆಟ-ಕೂಟ-ಕುದಿಕಕೂಟದ ಚಾವಡಿಯನ್ನು ಉಧ್ಘಾಟಿಸಿ ಮಾತನಾಡಿದ ಖ್ಯಾತ ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ವಿದ್ವತ್ ಬಲದಿಂದ ಆರ್ಥಧಾರಿಯಾಗುವುದು ಸುಲಭ, ಅದರೆ, ಯಕ್ಷಗಾನ ಸಂಘದಲ್ಲಿ ಪಳಗಿ ಖ್ಯಾತ ಅರ್ಥಧಾರಿಯಾದವರು ತುಂಬ ಕಲಾವಿದರು ಯಕ್ಷಗಾನ ರಂಗದಲ್ಲಿ ಇದ್ದಾರೆ, ಪುರಾಣ ವ್ಯಕ್ತಿಗಳ ಪರಿಚಯ ಹಾಗು ಭಾರತೀಯ ಸಂಸ್ಕೃತಿಯನ್ನು ತಿಳಿಸಿಕೊಡುವ ಯಕ್ಷಗಾನದಿಂದ ಬಹುಮುಖ ವ್ಯಕ್ತಿತ್ವವನ್ನು ರೂಪಿಸಬಹುದು, ಯಕ್ಷಗಾನದ ಉಳಿವಿಗಾಗಿ ಶ್ರೀ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ಸೂಡದ ಸಂಘಟಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ಕಾರ್ಕಳದ ವಿಧಾನಸಭ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು,

ಇದೇ ಸಂದರ್ಭದಲ್ಲಿ ಸೂಡ ಶ್ರೀ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ಇದರ ಸಂಚಾಲಕರಾದ ಶ್ರೀ ಸೂಡ ಹರೀಶ್ ಶೆಟ್ಟಿಯವರು ರಚಿಸಿದ 48ನೇ ಯಕ್ಷಗಾನ ಕತಿ 'ಮಾಯಕೊದ ಬಿನ್ನೆದಿ'ಯನ್ನು ಜಾನಪದ ಸಂಶೋಧಕ ಭಾಸ್ಕರ ರೆ ಕುಕ್ಕುವಳ್ಳಿ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ನಿವತ್ತ ಶಿಕ್ಷಕ ಕೋಟೆಬೀಡು ಶ್ರೀ ರಘುರಾಮ್ ಶೆಟ್ಟಿ ಯವರಿಗೆ ಸ್ಕಂದ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೇಸಿಐ ಬೆಳ್ಮಣ್ , ರೋಟರಿ ಕ್ಲಬ್ ಬೆಳ್ಮಣ್, ಲಯನ್ಸ್ ಕ್ಲಬ್ ಬೆಳ್ಮಣ್, ಹಳೆವಿದ್ಯಾರ್ಥಿ ಸಂಘ ಹೊಸಮಾರು, ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ಸಂಘಟನೆಗಳಿಗೆ ಸಮಗ್ರ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಪೆ : http://vijaykarnataka.indiatimes.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ